ಸಾಮಾನ್ಯ ಶೀತದಿಂದ ಉಂಟಾಗುವ ಕಿವಿನೋವಿಗೆ ಮನೆಮದ್ದು | Home Remedies For Ear Pain due to cold|Boldsky Kannada

2020-07-14 5

ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ತುಸು ಹೆಚ್ಚಾಗಿಯೇ ಕಾಡುತ್ತದೆ, ಅವುಗಳಲ್ಲೊಂದು ಕಿವಿನೋವು. ಶೀತದಿಂದಾಗಿ ಕಿವಿ ನೋವು ಕಂಡು ಬರುವುದು. ಮೂಗು ಮತ್ತು ಗಂಟಲುಗಳಿಗೆ ವೈರಸ್‌ಗಳು ತಾಗಿ ಶೀತ, ಗಂಟಲು ಕೆರೆತ ಉಂಟಾದಾಗ ಇವುಗಳ ಜೊತೆಯೇ ಕಿವಿ ಬ್ಲಾಕ್ ಆದಂತೆ ಅನಿಸುವುದು, ಕಿವಿಯಲ್ಲಿ ನೋವು ಈ ರೀತಿಯ ಸಮಸ್ಯೆಗಳೆಲ್ಲಾ ಕಂಡು ಬರುತ್ತದೆ. ವೈರಲ್‌ ಸೋಂಕು ತಗಲು ಸಾಮಾನ್ಯ ಶೀತದ ಲಕ್ಷಣಗಳು ಕಂಡು ಬರುವ ಮುನ್ನ ಅಥವಾ ಕಂಡು ಬಂದ ನಂತರ ಕಿವಿಗಳಲ್ಲಿ ನೋವು ಕಂಡು ಬರುವುದು. ಕೆಲವೊಮ್ಮೆ ನೋವಿನ ತೀವ್ರತೆ ಕಡಿಮೆ ಪ್ರಮಾಣದಲ್ಲಿ ಇದ್ದರೆ, ಇನ್ನು ಕೆಲವರಿಗೆ ಉಳಿದೆಲ್ಲಾ ಆರೋಗ್ಯ ಸಮಸ್ಯೆಗಿಂತ ಕಿವಿನೋವೇ ಹೆಚ್ಚು ಕಿರಿಕಿರಿ ಅನಿಸುವುದು. ಮೂಗು ಕಟ್ಟುವುದು, ಕಿವಿಯಲ್ಲಿ ನೋವು, ಸೈನಸ್ ಈ ರೀತಿಯ ಸಮಸ್ಯೆಗಳು ಸಾಮಾನ್ಯಶೀತದ ಲಕ್ಷಣಗಳಾಗಿದ್ದು, ಇಲ್ಲಿ ನಾವು ಕಿವಿ ನೋವು ಕಡಿಮೆ ಮಾಡಲು ಏನು ಮಾಡಬೇಕೆಂಬ ಟಿಪ್ಸ್ ನೀಡಿದ್ದೇವೆ ನೋಡಿ: ಮನೆಮದ್ದುಗಳು....

#earache #earpain #earinfections #remedy #remedies #homeremedy #homeremedies